ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗು ಗೋವಾ ಕನ್ನಡ ಸಮಾಜ ಪಣಜಿ ಇವುಗಳ ಜಂಟಿ ಆಶ್ರಯದಲ್ಲಿ “ ಹೊರನಾಡ ಕನ್ನಡಿಗರ ಭವಿಷ್ಯ ಚಿಂತನೆ ಮತ್ತು ಭಾಷಾ ಭಾವೈಕ್ಯ ಸಮಾವೇಶ” ಅಕ್ಟೋಬರ್ ೨ ಮತ್ತು ೩ ರಂದು ಗೋಮಂತಕ ಮರಾಠಾ ಸಭಾಭವನ, ಪಣಜಿ, ಗೋವಾ ಇಲ್ಲಿ ನಡೆಯಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯ ಮಂತ್ರಿ ಚಂದ್ರು  ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.  ಈ ಸಮಾವೇಶದಲ್ಲಿ ಬಹುಭಾಷ ಚಿಂತನಗೋಷ್ಠಿ , ಕವಿಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಕಲಾ ಪ್ರದರ್ಶನ ನೀಡಲಿವೆ.

ದಿನಾಂಕ: ೨ ಮತ್ತು ೩ ಅಕ್ಟೋಬರ್ ೨೦೧೦

ಸ್ಥಳ: ಗೋಮಂತಕ ಮರಾಠಾ ಸಭಾಭವನ, ಪಣಜಿ, ಗೋವಾ

Advertisements