ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಪುಸ್ತಕ ಬಿಡುಗಡೆ ಜೊತೆಗೆ ಉಪ್ಪಿಟ್ಟು, ಕಾಫಿ..ಡ್ಯಾನ್ಸ್ ಷೋ ಜೊತೆಗೆ ಒಂದಿಷ್ಟು ಕೇಸರಿಬಾತ್, ಆರ್ಟ್ ಎಗ್ಸಿಬಿಶನ್ ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ  ಅಂದ್ರೆ ಹರಟೆ ಹೊಡೆಯಲು ಸಾಕಷ್ಟು ಗೆಳೆಯರು..

ಏನೆಲ್ಲಾ…

ಜೆ ಪಿ ನಗರದ ರಂಗ ಶಂಕರ ರಾಜಾಜಿನಗರಕ್ಕೆ ದೂರ, ಮಲ್ಲೇಶ್ವರಂ ಸೇವಾ ಸದನ ಗಾಂಧೀ ಬಜಾರ್ ಗೆ ದೂರ, ಚೌಡಯ್ಯ ಹಾಲ್ ಹೋಗೋದೇ ಬೇಡ.. ಎನ್ನುವಷ್ಟು ದೂರಗಳು ಟ್ರಾಫಿಕ್ ನಿಂದ ಹುಟ್ಟಿಕೊಂಡಿದೆ

ಹಾಗಾಗಿ ‘ನಿಮ್ಮ ಏರಿಯಾಲ್ ಒಂದಿನ’ ಏನೇನಾಗುತ್ತೆ ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ಏರಿಯಾಗೂ ಬನ್ನಿ ಅಂತ ಕರೆಯೋ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೆಂಗಳೂರು ಬಿಟ್ಟು ಎಲ್ಲೆಲ್ಲೋ ನಡೆಯೋ ಎಲ್ಲಾ ಕಾರ್ಯಕ್ರಮವೂ ಇಲ್ಲಿರುತ್ತೆ.

ಹಾಗಾಗಿ ,

ದಯವಿಟ್ಟು ತಪ್ಪದೇ ಬನ್ನಿ

ಈ ಬ್ಲಾಗ್ ಯೂಸ್ ಮಾಡೋದು ಹೇಗೆ?

-ನಿಮ್ಮ ಇನ್ವಿಟೇಶನ್ ಇಲ್ಲಿ ಬರಬೇಕಾ

ಹಾಗಾದ್ರೆ

invitations.blog@gmail.com

ಗೆ ನಿಮ್ಮ ಇನ್ವಿಟೇಶನ್ ಕಳಿಸಿಕೊಡಿ

ಆ ಪ್ರೋಗ್ರಾಮ್ ಬಗ್ಗೆ ನಿಮಗೆ ಏನಾದರೂ ಹೇಳಬೇಕಾಗಿದೆ ಅನಿಸಿದರೆ ಅದನ್ನೂ ಕಳಿಸಿ

ನೀವೇ ಇನ್ವೈಟ್ ಮಾಡಿದ ಥರಾ ಇರಬೇಕು ಅಂದ್ರೆ ಅದನ್ನೂ ಬರೆದು ಕಳಿಸಿ ಎಲ್ಲಾ ನೀವು ಕಳಿಸಿದ ತಕ್ಷಣ ಈ ಬ್ಲಾಗ್ ನಲ್ಲಿ ಅಪಿಯರ್ ಆಗುತ್ತೆ.

-ಕಾರ್ಯಕ್ರಮ ಮಾಡೋರೆ ಕಳಿಸಬೇಕು ಅಂತಾ ಏನೂ ಇಲ್ಲ

ನಿಮಗೆ ಯಾವುದೋ ಒಳ್ಳೆ ಕಾರ್ಯಕ್ರಮ ನಡೀತಾ ಇರೋದು ಗೊತ್ತಾದ್ರೆ, ಈ ಕಾರ್ಯಕ್ರಮ ಬೇರೆಯವರು ಮಿಸ್ ಮಾಡಿಕೊಳ್ಳಲೇಬಾರದು  ಅನಿಸಿದರೆ ಅದನ್ನೂ ಕಳಿಸಿ- ಲಿಂಕ್ ಕಳಿಸಿದರೂ ಸಾಕು , ನಿಮ್ಮ ರೆಕಮೆಂಡೆಶನ್ ಥರಾ ಬ್ಲಾಗ್ ನಲ್ಲಿ ಅಪಿಯರ್ ಆಗುತ್ತೆ..

ಈ ಬ್ಲಾಗ್ ನಲ್ಲಿ ಸಿಕ್ಕಾಪಟ್ಟೆ ಅನುಕೂಲ ಇದೆ

# ಪ್ರತೀ ಪೋಸ್ಟ್ ನೋಡಿದಾಗ ಅದರ ಕೆಳಗೆ ಫೇಸ್ ಬುಕ್, ಟ್ವಿಟರ್ ಕಾಣುತ್ತೆ. ಅದನ್ನ ಒತ್ತಿದರೆ ಸಾಕು ನಿಮ್ಮ ಫೇಸ್ ಬುಕ್, ಟ್ವಿಟರ್ ನಲ್ಲಿ ಆ ಇನ್ವಿಟೇಶನ್ ಕಾಣಿಸಿಕೊಳ್ತು ಅಂತಾನೇ ಅರ್ಥ

# ಅಷ್ಟೇ ಅಲ್ಲ ಇದನ್ನ ಮೇಲ್ ಮಾಡಬೇಕು ಅಂದ್ರೆ ‘ಇ ಮೇಲ್’ ಅನ್ನೋ ಬಟನ್ ಇದೆ. ಅದನ್ನ ಒತ್ತಿ ಬೇಕಾದಷ್ಟು ಜನಕ್ಕೆ ಮೇಲ್ ಮಾಡಿ

# ಅಷ್ಟೇ ಅಲ್ಲ ಪ್ರಿಂಟ್ ಅನ್ನೋ ಬಟನ್ ಒತ್ತಿ ಆ ಇನ್ವಿಟೇಶನ್ ನಿಮಗೆ ಇನ್ವಿಟೇಶನ್ ಹಾಗೆ ಕಾಗೆ ಬಂದು ಕೂದುತ್ತೆ

ಇನ್ನೂ ಏನಾದರೂ ಡೌಟ್ ಇದ್ರೆ ಡೋಂಟ್ ವರಿ..  ನಮಗೆ ಮೇಲ್ ಮಾಡಿ ಉತ್ತರ ಕೊಡ್ತೀವಿ.

ಈಗ ಒಂದು ಕೆಲಸ ಮಾಡಿ

ಒಂದು ಇನ್ವಿಟೇಶನ್ ನಮಗೆ ಮೇಲ್ ಮಾಡಿ..ಓ ಕೆ